ಪವನ್ ನೇಗಿ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಎಡಗೈ ಲೆಗ್ ಸ್ಪಿನ್ನ್ ಬೌಲರ್ ಹಾಗು ಕೆಳ ಕ್ರಮಾಂಕದ ಬ್ಯಾಟ್ಸಮಾನ್. ರಣಜಿ ಟ್ರೋಫೀ‌‌ಯಲ್ಲಿ ದೆಹಲಿ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಾರೆ. == ಆರಂಭಿಕ ಜೀವನ == ಪವನ್ ನೇಗಿ ಜನವರಿ ೦೬, ೧೯೯೩ ರಂದು ದೆಹಲಿಯಲ್ಲಿ ಜನಿಸಿದರು. ಇವರು ತಮ್ಮ ಪ್ರಥಮ ದರ್ಜೆ ಕ್ರಿಕೆಟ್, ರಣಜಿ ಟ್ರೋಫೀ ಹಾಗೂ ದೇ‍ಶಿ ಟಿ-೨೦ ಸರಣಿಗಳನ್ನು ದೆಹಲಿ ತಂಡದ ಪರ ಆಡುತ್ತಾರೆ. == ವೃತ್ತಿ ಜೀವನ == === ಐಪಿಎಲ್ ಕ್ರಿಕೆಟ್ === ಏಪ್ರಿಲ್ ೨೧, ೨೦೧೨ರಂದು ಬೆಂಗಳೂರಿನ ಫಿರೋಜ್ ಷಾ ಕೋಟ್ಲಾ, ದೆಹಲಿಯಲ್ಲಿ ನಡೆದ ೨೭ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಪೂಣೆ ವಾರಿಯರ್ಸ್ ಇಂಡಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು.೨೦೧೬ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಇವರನ್ನು ೮.೫ ಕೋಟಿ ರೂಪಾಯಿಗಳಿಗೆ ಖರೀದಿಸುವ ಮೂಲಕ ಇವರನ್ನು ಆ ಆವೃತಿಯ ೨ನೇ ಅತೀ ದುಬಾರಿ ಆಟಗಾರನಾಗಿ ಹೊರಹೊಮ್ಮಿದರು. ಇಲ್ಲಿವರೆಗೆ ೩೧ ವಿಕೇಟ್‌‌ಗಳ ಜೊತೆಗೆ ಒಟ್ಟು ೮೩೭ ರನ್ ಕಲೆಹಾಕಿದ್ದಾರೆ. === ಅಂತರರಾಷ್ಟ್ರೀಯ ಕ್ರಿಕೆಟ್ === ಮಾರ್ಚ್ ೦೩, ೨೦೧೬ರಲ್ಲಿ ಧಾಕಾ, ಬಾಂಗ್ಲಾದೇಶದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ದ ನಡೆದ ಒಂಬತ್ತನೇ ಏಷ್ಯಾ ಕಪ್ ಟಿ-೨೦ ಪಂದ್ಯದ ಮೂಲಕ ಪವನ್ ನೇಗಿ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. == ಪಂದ್ಯಗಳು == ಟಿ-೨೦ ಕ್ರಿಕೆಟ್ : ೦೧ ಪಂದ್ಯಗಳು. ಐಪಿಎಲ್ ಕ್ರಿಕೆಟ್ : ೪೩ ಪಂದ್ಯಗಳು === ವಿಕೇಟ್‌ಗಳು === ಐಪಿಎಲ್ ಪಂದ್ಯಗಳಲ್ಲಿ : ೩೧ ಏಕದಿನ ಪಂದ್ಯಗಳಲ್ಲಿ : ೦೧ == ಉಲ್ಲೇಖಗಳು ==